top of page

ಸ್ಕಿನ್ ಗ್ಲೋ ಹಾಗೂ ತೂಕ ಇಳಿಸಲು ಇದನ್ನು ಬಳಸಿ

  • Writer: Ananthamurthy m Hegde
    Ananthamurthy m Hegde
  • Dec 20, 2024
  • 1 min read

ಹಾಲು ಒಂದು ಆರೋಗ್ಯಕರ ಪೌಷ್ಟಿಕಾಂಶದ ಭರಿತ ಪಾನೀಯವಾಗಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಹಾಲು ಅಗತ್ಯ. ಕೆಲವರು ಹಾಲನ್ನು ಸಪ್ಪೆಯಾಗಿಯೇ ಕುಡಿಯಲು ಇಷ್ಟಪಟ್ಟರೆ ಇನ್ನೂ ಕೆಲವರು ಅದಕ್ಕೆ ಸಕ್ಕರೆ ಹಾಕಿ ಕುಡಿಯಲು ಇಷ್ಟಪಡುತ್ತಾರೆ. ಸಕ್ಕರೆಯ ಬದಲಿಗೆ ಹಾಲಿಗೆ ಜೇನುತುಪ್ಪವನ್ನು ಸೇರಿಸಿ ಕುಡಿಯೋದ್ರಿಂದ ಆರೋಗ್ಯಕ್ಕೆ ಒಳ್ಳೆಯದು. ಇದ್ದರಿಂದ ಸಾಕಷ್ಟು ಪ್ರಯೋಜನಗಳಿವೆ. ಅವುಗಳ ಬಗ್ಗೆ ನಾವಿಲ್ಲಿ ತಿಳಿಯೋಣ.


ರೋಗನಿರೋಧಕ ಶಕ್ತಿ ಬಲವಾಗಿರುತ್ತದೆ

ನಾವು ಆರೋಗ್ಯದಿಂದಿರಬೇಕಾದರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಉತ್ತಮವಾಗಿರಬೇಕು. ಹಾಲು ಮತ್ತು ಜೇನುತುಪ್ಪ ಬೆರೆಸಿ ಕುಡಿದರೆ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಲಿನಲ್ಲಿ ಕಂಡುಬರುವ ಪ್ರೊಟೀನ್-ಕ್ಯಾಲ್ಸಿಯಂ ಮತ್ತು ಜೇನುತುಪ್ಪದ ಆಂಟಿಆಕ್ಸಿಡೆಂಟ್ ಗುಣಗಳು ನಿಮ್ಮನ್ನು ಅನೇಕ ರೋಗಗಳಿಂದ ರಕ್ಷಿಸಲು ಸಹಾಯಮಾಡುತ್ತದೆ .


ಬೊಜ್ಜನ್ನು ಕಳೆದುಕೊಳ್ಳಲು ಸಹಕಾರಿ

ಬೊಜ್ಜು ಇಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗುತ್ತಿದೆ. ಜನರು ಅದನ್ನು ಕಡಿಮೆ ಮಾಡಲು ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಎಷ್ಟೇ ಡಯೆಟ್‌ ಫಾಲೋ ಮಾಡಿದ್ರೂ ತೂಕ ಇಳಿಯೋದಿಲ್ಲ. ಪ್ರತಿದಿನ ಜೇನುತುಪ್ಪ ಬೆರೆಸಿ ಹಾಲು ಕುಡಿದರೆ ನಿಮ್ಮ ಅಧಿಕ ತೂಕದ ಸಮಸ್ಯೆ ಕೆಲವೇ ದಿನಗಳಲ್ಲಿ ದೂರವಾಗುತ್ತದೆ. ಹಾಲು ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿಯೋದು ತೂಕ ಇಳಿಸಲು ಸಹಕಾರಿಯಾಗಿದೆ. ಜೇನುತುಪ್ಪದಲ್ಲಿರುವ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ದೇಹದ ತೂಕವನ್ನು ನಿಯಂತ್ರಿಸುತ್ತದೆ ಮತ್ತು ಸ್ಥೂಲಕಾಯತೆಯನ್ನು ನಿವಾರಿಸುತ್ತದೆ.ಒತ್ತಡದಲ್ಲಿ

ಇತ್ತೀಚಿನ ದಿನಗಳಲ್ಲಿ ಜೀವನಶೈಲಿಯು ಅನೇಕ ರೀತಿಯ ಒತ್ತಡ ಉಂಟುಮಾಡುತ್ತದೆ. ನೀವು ಒತ್ತಡದಲ್ಲಿದ್ದರೆ ಹಾಲು ಮತ್ತು ಜೇನುತುಪ್ಪವು ನಿಮಗೆ ರಾಮಬಾಣವಾಗಿದೆ. ಈ ಎರಡನ್ನೂ ಬೆರೆಸಿ ಕುಡಿಯುವುದರಿಂದ ಒತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಮನಸ್ಸನ್ನು ಶಾಂತವಾಗಿರಿಸುತ್ತದೆ. ಸಂಶೋಧನೆಯ ಪ್ರಕಾರ, ಹಾಲು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಜೇನುತುಪ್ಪವು ನರಗಳಿಗೆ ಪ್ರಯೋಜನಕಾರಿಯಾಗಿದೆ.


ಉಸಿರಾಟದ ಸಮಸ್ಯೆಗಳಿಂದ ಪರಿಹಾರ

ನಿಮಗೆ ಯಾವುದೇ ಉಸಿರಾಟದ ಸಮಸ್ಯೆ ಇದ್ದರೆ ಹಾಲು ಮತ್ತು ಜೇನುತುಪ್ಪದ ಮಿಶ್ರಣವು ನಿಮಗೆ ಪ್ರಯೋಜನಕಾರಿಯಾಗಿದೆ. ಉಸಿರಾಟದ ಸಮಸ್ಯೆ ಇದ್ದಲ್ಲಿ ಹಾಲು ಮತ್ತು ಜೇನುತುಪ್ಪ ಬೆರೆಸಿ ಔಷಧ ಸೇವಿಸಿ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಗ್ಲೋ ಸ್ಕಿನ್ ಪಡೆಯಲು ಸಹಕಾರಿ

ನಿಮ್ಮ ಚರ್ಮವು ಕಾಂತೀಹೀನವಾಗಿದ್ದರೆ, ಹೊಳಪನ್ನು ಕಳೆದುಕೊಂಡಿದ್ದರೆ, ನೀವು ಹಾಲಿಗೆ ಜೇನುತುಪ್ಪ ಬೆರೆಸಿ ಕುಡಿಯಬೇಕು. ಇದು ನಿಮ್ಮ ಮುಖದ ಕಾಂತಿಯನ್ನು ವರ್ಧಿಸುತ್ತದೆ ಮತ್ತು ನೈಸರ್ಗಿಕ ಹೊಳಪನ್ನು ನೀಡುತ್ತದೆ. ಹಾಗಾಗಿ ಪ್ರತಿದಿನ ಇದನ್ನು ಕುಡಿಯಿರಿ.

Comentarios


Top Stories

bottom of page