top of page

ನೇರಾ ನೇರ ಚಾಲೆಂಜ್ ನೀಡಿದ ಬಾದ್ ಷಾ

  • Writer: Ananthamurthy m Hegde
    Ananthamurthy m Hegde
  • Dec 24, 2024
  • 1 min read
ree

ಅನುಶ್ರೀ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಇಡೀ ಮೊದಲ ಬಾರಿಗೆ ನಟ ಸುದೀಪ್ ಭಾಗಿ ಆಗಿದ್ದರು. ‘ಮ್ಯಾಕ್ಸ್’ ಸಿನಿಮಾ ಜೊತೆಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾ ನಾಳೆ ಅದ್ಧೂರಿಯಾಗಿ ರಿಲೀಸ್‌ ಆಗುತ್ತಿದೆ. ಸಂದರ್ಶನದ ವೇಳೆ ಸುದೀಪ್‌ ಅವರು ಅನುಶ್ರೀ ಅವರಿಗೆ ಹೇಗೆ ಅನ್ನಿಸಿತ್ತು? ಎಂದು ಕೇಳಿದ್ದಾರೆ. ಇದಕ್ಕೆ ಸುದೀಪ್‌ ಉತ್ತರ ನೀಡಿ. ನನಗೆ ತುಂಬ ಜನ ಹೇಳಿದ್ದಾರೆ, ಅನುಶ್ರೀ ಸಂದರ್ಶನವನ್ನು ತುಂಬಾ ಚೆನ್ನಾಗಿ ನಡೆಸಿಕೊಡುತ್ತಾರೆ. ಏನೇ ಸಂದರ್ಶನ ಇದ್ದರೂ ಖುಷಿಯಿಂದ ನಡೆಸಿಕೊಡಬೇಕು. ಹಾಗೇ ನಿಮಗೆ ಎರಡು ಚಾಲೆಂಜ್‌ ಕೊಡ್ತೀನಿ. ಒಂದು ರಕ್ಷಿತ್‌ ಶೆಟ್ಟಿ ಹಾಗೂ ಅನೂಪ್‌ ಭಂಡಾರಿ ಅವರನ್ನ ನಗಿಸಬೇಕು. ಅದಕ್ಕೆ ಅನುಶ್ರೀ ಅವರು ರಕ್ಷಿತ್‌ ಅವರು ಹೆಚ್ಚು ನಕ್ಕಿದ್ದಾರೆ ಎಂದಿದ್ದಾರೆ.

ಅನೂಪ್‌‌ ಯಾಕೆ ನಗಲ್ಲ?

ಒಂದು ವೇಳೆ ಚಾಲೆಂಜ್ ಪ್ರಕಾರ ಅನುಶ್ರೀ ಸಂದರ್ಶನ ಮಾಡಿ ನಗಿಸದೇ ಸೋತರೆ ಮತ್ತೆ ನಿಮ್ಮೊಟ್ಟಿಗೆ ಇನ್ನುಂದು ಇಂಟರ್‌ವ್ಯೂ ಮಾಡ್ತೀನಿ ಎಂದು ಅನುಶ್ರೀ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಸುದೀಪ್, “ಒಂದು ವರ್ಷ ನೀವು ಯಾವುದೇ ಇಂಟರ್‌ವ್ಯೂ ಮಾಡುವಂತಿಲ್ಲ” ಎಂದಿದ್ದಾರೆ. ಇದನ್ನು ಕೇಳಿ ಅನುಶ್ರೀ ಶಾಕ್ ಆಗಿದ್ದಾರೆ.

ಏಕೆ ಅಂದರೆ ಅನೂಪ್‌ ಇದ್ದಾರಲ್ಲ! ಕಾಮಿಡಿ ಸೀನ್‌ ಅನ್ನ ಅತ್ಯಂತ ಸಿರಿಯೆಸ್‌ ಆಗಿ ದೃಶ್ಯ ತೆಗೆಯೋ ವ್ಯಕ್ತಿ ಅಂದರೆ ಅದು ಅನೂಪ್‌. ಕಾಮಿಡಿ ಕಲಾವಿದರು ಅವರನ್ನ ನೋಡಿ ಎಷ್ಟೋ ಸಲ ಹೆದರಿದ್ದು ಉಂಟು ಎಂದು ಅನೂಪ್‌ ಬಗ್ಗೆ ಸುದೀಪ್‌‌ ಹೇಳಿದ್ದಾರೆ. ರಂಗಿತರಂಗ’ ಚಿತ್ರದ ಮೂಲಕ ಅನೂಪ್ ಚಿತ್ರರಂಗಕ್ಕೆ ಬಂದರು. ಬಳಿಕ ‘ರಾಜರಥ’ ಚಿತ್ರ ಮಾಡಿ ಸೋತರು. ಬಳಿಕ ‘ವಿಕ್ರಾಂತ್ ರೋಣ’ ಸಿನಿಮಾ ಮಾಡಿ ಸಕ್ಸಸ್ ಕಂಡಿದ್ದಾರೆ. ಸದ್ಯ ಸುದೀಪ್ ಜೊತೆ ‘ಬಿಲ್ಲ ರಂಗ ಬಾಷ’ ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ.

ಮ್ಯಾಕ್ಸ್‌ ಸಿನಿಮಾ ತೆರೆಗೆ ಬರಲು ಸಜ್ಜು! 

ಡಿಸೆಂಬರ್-25 ರಂದು ಮ್ಯಾಕ್ಸ್ ಚಿತ್ರ ರಿಲೀಸ್ ಆಗುತ್ತಿದೆ. ಕನ್ನಡ, ತಮಿಳು, ತೆಲುಗು ಹೀಗೆ ಬಹುಭಾಷೆಯಲ್ಲಿಯೇ ಈ ಚಿತ್ರ ರಿಲೀಸ್ ಆಗುತ್ತಿದೆ. ಯುಐ ಆದ್ಮೇಲೆ ಬರ್ತಿರೋ ಮ್ಯಾಕ್ಸ್ ಚಿತ್ರದ ಬಗ್ಗೆನೂ ಕ್ರೇಜ್ ಇದೆ. ವರ್ಷದ ಬಿಗ್ ಸಿನಿಮಾಗಳಲ್ಲಿ ಒಂದು ಯುಐ ಆಗಿದೆ. ಮತ್ತೊಂದು ಮ್ಯಾಕ್ಸ್ ಚಿತ್ರವೇ ಆಗಿದೆ.

ಸಿನಿಮಾದಲ್ಲಿ ಸುದೀಪ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಒಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ರಾತ್ರಿಯಲ್ಲಿ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎನ್ನಲಾಗುತ್ತಿದೆ. ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ತಮಿಳಿನ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್ ತನು ಅವರು ನಿರ್ಮಾಣ ಮಾಡಿದ್ದಾರೆ.




Comments


Top Stories

bottom of page