top of page

ಬಾಕ್ಸ್ ಆಫೀಸ್‌ನಲ್ಲಿ ಬಘೀರನ ಭರ್ಜರಿ ಗಳಿಕೆ : ಜನರಿಂದ ಮೆಚ್ಚುಗೆ

  • Writer: Ananthamurthy m Hegde
    Ananthamurthy m Hegde
  • Nov 1, 2024
  • 1 min read

ರೋರಿಂಗ್ ಸ್ಟಾರ್ ಶ್ರೀಮುರುಳಿ, ರುಕ್ಮಿಣಿ ವಸಂತ್ ಅಭಿನಯದ ಬಹು ನಿರೀಕ್ಷಿತ ಬಘೀರ್ ಚಿತ್ರ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಬಘೀರ ಚಿತ್ರವು ೨.೩೮ ಗಂಟೆ ಇದೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದೆ. ಈ ಚಿತ್ರಕ್ಕೆ ಬುಕ್ ಮೈ ಶೋನಲ್ಲಿ ೨.೮ ಸಾವಿರ ಮಂದಿ ವೋಟ್ ಮಾಡಿದ್ದು, ಸದ್ಯಕ್ಕೆ ೯.೨ ರೇಟಿಂಗ್ ಸಿಕ್ಕಿದೆ.

ಟ್ರೇಲರ್ ಮೂಲಕವೇ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಮಾಡಿದ್ದ 'ಬಘೀರ' ಚಿತ್ರ ಥಿಯೇಟರ್‌ನಲ್ಲಿ ಹವಾ ಎಬ್ಬಿಸಿದೆ. ಈ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲೂ ಉತ್ತಮ ಗಳಿಕೆ ಮಾಡುತ್ತಿದೆ.

ನಿರ್ದೇಶಕ ಡಾ.ಸೂರಿ ಬಘೀರನಿಗೆ ಆ್ಯಕ್ಷನ್ ಕಟ್ ಹೇಳಿದ್ದು ಪ್ರಶಾಂತ್ ನೀಲ್ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್, ಪ್ರಕಾಶ್ ರಾಜ್, ಗರುಡ ರಾಮ್ ಮೊದಲಾದವರು ಬಣ್ಣ ಹಚ್ಚಿದ್ದರೆ. ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ.

ವರದಿಯೊಂದರ ಪ್ರಕಾರ 'ಬಘೀರ' ಚಿತ್ರ ಬರೋಬ್ಬರಿ ೨.೮ ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ. ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಈ ಚಿತ್ರಕ್ಕೆ ಮೊದಲ ದಿನ ವಿಮರ್ಶಕರಿಂದ ಮೆಚ್ಚುಗೆ ಸಿಕ್ಕಿದ್ದು ಮುಂದಿನ ದಿನಗಳಲ್ಲಿ ಚಿತ್ರಕ್ಕೆ ಭರ್ಜರಿ ಗಳಿಕೆ ಆಗುವುದು ಖಚಿತ ಎನ್ನಲಾಗುತ್ತಿದೆ. ದೀಪಾವಳಿ ಪ್ರಯುಕ್ತ ಸಾಲು ಸಾಲು ರಜೆಗಳಿರುವುದು ಸಿನಿಮಾಗೆ ಸಹಕಾರಿ ಆಗಲಿದೆ.

Comments


Top Stories

bottom of page