top of page

ಬಿಗ್ ಬಾಸ್ ನಿಂದ ಗೋಲ್ಡ್ ಸುರೇಶ ಔಟ್ : ಲೈವ್ ಮೂಲಕ ಸ್ಪಷ್ಟನೆ

  • Writer: Ananthamurthy m Hegde
    Ananthamurthy m Hegde
  • Dec 20, 2024
  • 1 min read

ree

ಬಿಗ್ ಬಾಸ್ ಕನ್ನಡ 11ರ (Bigg Boss Kannada 11) ಆಟ ರಂಗೇರಿದೆ. ಕಳೆದ ವಾರಂತ್ಯದಲ್ಲಿ ಶಿಶಿರ್ ಶಾಸ್ತ್ರಿ ಎಲಿಮಿನೇಷನ್ ಬಳಿಕ ಕುಟುಂಬದಲ್ಲಿನ ತುರ್ತು ಪರಿಸ್ಥಿತಿ ಹಿನ್ನೆಲೆ ಗೋಲ್ಡ್ ಸುರೇಶ್ (Gold Suresh) ಸಡನ್ ಆಗಿ ಮನೆಯಿಂದ ನಿರ್ಗಮಿಸಿದ್ದರು. ಆದರೆ ಯಾವ ಕಾರಣಕ್ಕೆ ಅವರು ಹೊರಬಂದರು ಎಂಬುದಕ್ಕೆ ಕ್ಲ್ಯಾರಿಟಿ ಸಿಕ್ಕಿರಲಿಲ್ಲ. ಇದೀಗ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.‌

ನನಗೆ ಬಿಗ್ ಬಾಸ್ ಕಡೆಯಿಂದ ಅವಕಾಶ ಬಂದಾಗ ಮೊದಲೇ ಯೋಚನೆ ನನಗೆ ಶುರುವಾಗಿತ್ತು. ನಾನು ಒಳಗೆ ಹೋದ್ರೆ ನನ್ನ ಬ್ಯುಸಿನೆಸ್ ಯಾರಿಗೆ ಬಿಟ್ಟು ಹೋಗಲಿ ಅಂತ. ಆಗ ನನ್ನ ವ್ಯವಹಾರವನ್ನು ನನ್ನ ಪತ್ನಿಗೆ ಬಿಟ್ಟು ಹೋಗಿದ್ದೆ, ಆದರೆ ಬ್ಯುಸಿನೆಸ್ ಅನ್ನು ಹ್ಯಾಂಡಲ್ ಮಾಡೋಕೆ ಬರಲಿಲ್ಲ. ಅದರ ಬಗ್ಗೆ ಜ್ಞಾನನೇ ಇಲ್ಲದಿರೋ ವ್ಯಕ್ತಿಗೆ ನಾನು ವಹಿಸಿ ಬಂದಿದ್ದೆ, ಅದಕ್ಕೆ ಪತ್ನಿಗೆ ನಿರ್ವಹಿಸಲು ಆಗಿಲ್ಲ. ನನ್ನ ಕಂಪನಿಯಲ್ಲಿ ಕೆಲ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳಬೇಕಾಗುತ್ತದೆ. ಹಾಗಾಗಿ ನಾನೇ ಹೊರಗೆ ಬರಬೇಕಾಯಿತು. ಅದು ಬಿಟ್ಟು ಆತಂಕ ಪಡುವಂತಹದ್ದು ಏನು ಆಗಿಲ್ಲ ಎಂದಿದ್ದಾರೆ.

ಈ ವೇಳೆ, ತಂದೆ ಆರೋಗ್ಯದ ಬಗ್ಗೆ ಕೂಡ ಸುರೇಶ್ ಸ್ಪಷ್ಟನೆ ನೀಡಿದರು. ಅಪ್ಪ ಆರೋಗ್ಯವಾಗಿದ್ದಾರೆ. ಅವರಿಗೇನು ಆಗಿಲ್ಲ. ಅವರ ಬಗ್ಗೆ ತಪ್ಪು ಸಂದೇಶ ಯಾರಿಗೂ ಹೋಗಬಾರದು ಅನ್ನೋದು ನನ್ನ ಅಭಿಪ್ರಾಯ. ಯಾರೇ ವ್ಯಕ್ತಿಯ ಸಾವಿನ ಸುದ್ದಿ ಹರಡುತ್ತಿದೆ ಎಂದರೆ ಸತ್ಯ ಯಾವುದು ಸುಳ್ಳು ಯಾವುದು ಎಂದು ಸ್ಪಷ್ಟನೆ ತೆಗೆದುಕೊಳ್ಳಬೇಕು ಎಂದು ಮಾತನಾಡಿದ್ದಾರೆ. ಈ ಮೂಲಕ ತಂದೆ ಆರೋಗ್ಯದ ಬಗ್ಗೆ ಕ್ಲ್ಯಾರಿಟಿ ನೀಡಿದ್ದಾರೆ.

Comments


Top Stories

bottom of page