top of page

ಭಾರತದ ಕೊನೆರು ಹಂಪಿ ಫಿಡೆ ಮಹಿಳಾ ರ್‍ಯಾಪಿಡ್ ಚೆಸ್‌ನಲ್ಲಿ ವಿಶ್ವ ಚಾಂಪಿಯನ್

Writer: Ananthamurthy m Hegde
Ananthamurthy m Hegde
Dec 30, 2024
1 min read

ನ್ಯೂಯಾರ್ಕ್: ಭಾರತದ ಗ್ರಾಂಡ್‌ಮಾಸ್ಟರ್‌ ಕೊನೆರು ಹಂಪಿ ಫಿಡೆ ಮಹಿಳಾ ರ್‍ಯಾಪಿಡ್ ಚೆಸ್‌ನಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಒಂದಕ್ಕಿಂತ ಹೆಚ್ಚು ಬಾರಿ ಟ್ರೋಫಿ ಗೆದ್ದ ವಿಶ್ವದ 2ನೇ ಚೆಸ್ ತಾರೆ ಎನಿಸಿಕೊಂಡಿದ್ದಾರೆ.

37 ವರ್ಷದ ಕೊನೆರು ಹಂಪಿ ಭಾನುವಾರ ಇಂಡೋನೇಷ್ಯಾದ ಸುಕಂದರ್ ವಿರುದ್ಧ ಗೆಲ್ಲುವ ಮೂಲಕ ಚಾಂಪಿಯನ್‌ಶಿಪ್ ಮುಡಿಗೇರಿಸಿಕೊಂಡರು. ಈ ಮೊದಲು ಅವರು 2019ರಲ್ಲೂ ಪ್ರಶಸ್ತಿ ಗೆದ್ದಿದ್ದರು. ಕೊನೆರು ಹೊರತಾಗಿ ಚೀನಾದ ಜು ವೆನ್‌ಜುನ್ ಮಾತ್ರ 1ಕ್ಕಿಂತ ಹೆಚ್ಚು ಬಾರಿ ಚಾಂಪಿಯನ್ ಆಗಿದ್ದಾರೆ.

ಆರಂಭಿಕ ಸುತ್ತಿನಲ್ಲಿ ಸೋತಿದ್ದ ಕೊನೆರು ಒಟ್ಟು 11 ಸುತ್ತಿನ ಪಂದ್ಯಗಳ ಬಳಿಕ 8.5 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರು. ಭಾರತದ ಹರಿಕಾ ದ್ರೋಣವಲ್ಲಿ ಸೇರಿದಂತೆ ಒಟ್ಟು ಮಂದಿ ತಲಾ 8 ಅಂಕದೊಂದಿಗೆ ಜಂಟಿ 2ನೇ ಸ್ಥಾನ ಹಂಚಿಕೊಂಡರು.

ಈ ಗೆಲುವು ಐತಿಹಾಸಿಕ. ಅವರ ಬದ್ಧತೆ, ಪ್ರತಿಭೆ ಕೋಟ್ಯಂತರ ಭಾರತೀಯರಿಗೆ ಮಾದರಿ, ಚೆಸ್ ನಲ್ಲಿ ಇದು ಭಾರತದ ಸಮಯ. ವಿಶ್ವ ಚಾಂಪಿಯನ್ ಗುಕೇಶ್ ನಮ್ಮಲ್ಲಿದ್ದಾರೆ. ಈಗ ರ್‍ಯಾಪಿಡ್‌ ಇವೆಂಟ್‌ನಲ್ಲಿ 2ನೇ ವಿಶ್ವ ಚಾಂಪಿಯನ್‌ಶಿಪ್ ಗೆದ್ದಿದ್ದೇವೆ. ಭಾರತೀಯ ಚೆಸ್‌ ಪ್ರತಿಭೆಗಳಿಗೆ ಇದು ಪ್ರೇರಣೆಯಾಗಲಿದೆ ಎಂದು ನರೇಂದ್ರ ಮೋದಿ ಶುಭ ಕೋರಿದ್ದಾರೆ.  


Comments


Top Stories

1/322
bottom of page