ಮುಂಡಗೋಡ ಪಟ್ಟಣ ಪಂಚಾಯತ ಅಧ್ಯಕ್ಷರಾಗಿ ಶಿವರಾಜ್ ಸುಬ್ಬಯ್ಯನವರ್ ಆಯ್ಕೆ
- Ananthamurthy m Hegde
- Dec 10, 2024
- 1 min read
ಮುಂಡಗೋಡ: ಇಲ್ಲಿನ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಕಾಳಗಿನಕೊಪ್ಪ ವಾರ್ಡಿನ ಶಿವರಾಜ ಸುಬ್ಬಯ್ಯನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪ.ಪಂ ಸದಸ್ಯರಾದ ರಜಾಖಾನ ಪಠಾಣ ಹಾಗೂ ಶಿವರಾಜ ಸುಬ್ಬಾಯವರ ನಡುವೆ ಪೈಪೋಟಿ ನಡೆದಿತ್ತು. ಇದರಿಂದಾಗಿ ಹಲವು ತಿಂಗಳುಗಳಿಂದ ನೆನಗುದ್ದಿಗೆ ಬಿದ್ದಿದ ಪ.ಪಂ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಶಿವರಾಜ ಸುಬ್ಬಯ್ಯನವರ ಅವಿರೋಧವಾಗಿ ಆಯ್ಕೆಯಾಗಿದ್ದು, ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಮುಖಂಡ ಜ್ಞಾನ ದೇವ ಗುಡಿಯಾಳ, ಎ.ಎಫ್ ಮಡ್ಲಿ, ನಾಗಭೂಷಣ ಹಾವಣಗಿ, ರಾಮಣ್ಣ ಸುಬ್ಬಾಯ್ಯನವರ ಸೇರಿದಂತೆ ಅಭಿನಂದಿಸಿದರು.
Comments