ಮೈಸೂರು ಸ್ಯಾಂಡಲ್‌ಗೆ ತಮ್ಮನ್ನಾ ಬ್ರ್ಯಾಂಡ್ ಅಂಬಾಸಿಡರ್ ಆಗಿರೋ ಬಗ್ಗೆ ರಿಯಾಕ್ಟ್ ಮಾಡಿದ ನಟಿ ರಮ್ಯಾ
- Ananthamurthy m Hegde
- 6 hours ago
- 1 min read

ಮೈಸೂರು ಸ್ಯಾಂಡಲ್ ಸೋಪ್ ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನಟಿ ತಮನ್ನಾ ಭಾಟಿಯಾ ಅವರ ಆಯ್ಕೆ ಈಗ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಕನ್ನಡ ನಟಿಯರನ್ನೇ ನೇಮಕ ಮಾಡಿಬದುದೆಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ನಟ ರಮ್ಯಾ ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ
ಈ ಒಂದು ಸೋಪ್‌ಗೆ ರಾಯಭಾರಿಗಳೇ ಬೇಕಿಲ್ಲ. ಇದಕ್ಕೆ ಸುಮ್ನೆ ದುಡ್ಡು ವೇಸ್ಟ್ ಮಾಡಿದಂತೇನೆ ಬಿಡಿ. ಕಾರಣ, ಮೈಸೂರು ಸ್ಯಾಂಡಲ್ ಸೋಪ್‌ಗೆ ಪ್ರತಿ ಕನ್ನಡಿಗರೂ ರಾಯಭಾರಿಗಳೇ ಆಗಿದ್ದಾರೆ. ಹಾಗಾಗಿಯೇ ರಾಯಭಾರಿಗಳು ಬೇಕಿಲ್ಲ. ಹಾಗೇನೆ ಈಗೀನ ದಿನಗಳಲ್ಲಿ ಸೋಪ್ ಹಚ್ಚಿಕೊಂಡರೆ ಆ ನಟಿಯರ ತರ ಆಗ್ತಾರೆ ಅಂತ ಯಾರೂ ಯೋಚನೆ ಮಾಡೋದಿಲ್ಲ. ಜನಕ್ಕೆ ಎಲ್ಲವೂ ಗೊತ್ತಿದೆ ಅಂತಾ ಪ್ರತಿಕ್ರಿಯೆ ನೀಡಿದ್ದಾರೆ.
Comments