ಮತ್ತೆ ಜೈಲು ಸೇರಿದ ಚೈತ್ರಾ ಕುಂದಾಪುರ
- Ananthamurthy m Hegde
- Dec 20, 2024
- 1 min read

ಬಿಗ್ ಬಾಸ್ ಮನೆಯಲ್ಲಿ ಈ ವಾರ ಮತ್ತೆ ಚೈತ್ರಾ ಕುಂದಾಪುರ ಅವರು ಕಳಪೆ ಪಡೆದು ಜೈಲು ಸೇರಿದ್ದಾರೆ. ಪ್ರತಿ ವಾರ ಚೈತ್ರಾ ಅವರು ಕಳಪೆ ಪಡೆದು ಜೈಲಿಗೆ ಹೋಗುತ್ತಲೇ ಇದ್ದಾರೆ. ಸ್ಪರ್ಧಿಗಳ ಅಭಿಪ್ರಾಯದ ಬಗ್ಗೆಯೂ ಚೈತ್ರಾ ಗರಂ ಆದರು.
ಚೈತ್ರಾ ಈ ವಾರ ಉಸ್ತುವಾರಿಯಲ್ಲಿ ಪಕ್ಷಪಾತ ಮಾಡಿದರು ಎಂಬ ಕಾರಣಕ್ಕೆ ಹಲವರು ಕಳಪೆಯನ್ನು ಕೊಟ್ಟರು. ಇನ್ನು ಈ ಬಗ್ಗೆ ಚೈತ್ರಾ ಅವರು ಗುಂಪು ಕಟ್ಟಿಕೊಂಡು ಕಳಪೆ ನೀಡುತ್ತೀದ್ದೀರಾ ಎಂದು ವಾದಿಸಿದರು. ಈ ಬಗ್ಗೆ ಹನುಮಂತ ಕೂಡ ಸ್ವಲ್ಪ ಗರಂ ಆಗಿ, ನಿನಗೆ ಪದೇ ಪದೇ ಕಳಪೆ ಕೊಡೋಕೆ ನೀನೇನು ಚಿಕ್ಕಮ್ಮ, ದೊಡ್ಡಮ್ಮ ಮಗಳಲ್ಲ ಎಂದಿದ್ದಾರೆ.
ಇನ್ನು ಧನರಾಜ್ ಹಾಗೂ ಮೋಕ್ಷಿತಾ ಅವರು ಕೂಡ ಪಕ್ಷಪಾತ ವಿಚಾರವಾಗಿ ಕಳಪೆ ಕೊಟ್ಟರು. ಕುಣಿಯಕ್ಕೆ ಬಾರದೇ ಇರೋನು ನೆಲ ಡೊಂಕು ಇದ್ದಾಗೆ, ಆಡಕ್ಕೆ ಬರದೇ ಇದ್ದವನು ಸೋತೆ ಅಂತ ನಾನು ಹೇಳಲ್ಲ ಎಂದಿದ್ದಾರೆ ಚೈತ್ರಾ. ಇನ್ನು ರಜತ್ ಕೂಡ ಮುಂದಿನ ದಿನಗಳಲ್ಲಿ ನೀವು ಉಸ್ತುವಾರಿ ಆಗಿ ಬಂದರೆ ನಮ್ಮ ತಂಡ ನಿಮಗೆ ಕೈ ಮುಗಿಯುತ್ತೆ ಎಂದಿದ್ದಾರೆ.
ಮತ್ತೊಮ್ಮೆ ಕ್ಯಾಪ್ಟನ್ ಆಡ್ ಭವ್ಯಾ
ಈ ವಾರದ ಕ್ಯಾಪ್ಟನ್ ಆಗಿ ಭವ್ಯಾ ಗೌಡ ಆಯ್ಕೆ ಆಗಿದ್ದಾರೆ . ಕಳೆದ ದಿನ ನಡೆದ ಟಾಸ್ಕ್ ವಿಚಾರದಲ್ಲಿ ಹನುಮಂತ ಹಾಗೂ ಚೈತ್ರಾ ನಡುವೆ ಗಲಾಟೆ ನಡೆದಿತ್ತು. ನಿಯಮ ಪಾಲಿಸದ ಕಾರಣ ಚೈತ್ರಾ ತಂಡದ ಉಸ್ತುವಾರಿಯಲ್ಲಿ ಆಟ ರದ್ದಾಗಿತ್ತು.
ಜೊತೆಗೆ ಮೋಕ್ಷಿತಾ ಕೂಡ ಚೈತ್ರಾ ಅವರನ್ನು ಪಕ್ಷಪಾತಿ ಎನ್ನುವ ಪಟ್ಟ ನೀಡಿ ಕಳಪೆ ನೀಡಿದ್ದಾರೆ. ಮನೆಯಲ್ಲಿ ಒಬ್ಬರಿಗೆ ಒಂದು ರೀತಿ ಇನ್ನೊಬ್ಬರಿಗೆ ಇನ್ನೊಂದು ರೀತಿ ನೋಡ್ತಾರೆ ಚೈತ್ರಾ. ಹೀಗಾಗಿ ನಾನು ಕಳಪೆ ನೀಡುತ್ತೇನೆಂದು ಮೋಕ್ಷಿತಾ ಕಾರಣ ನೀಡಿದ್ದಾರೆ.
ಈ ವಾರ ನೋ ಎಲಿಮಿನೇಷನ್!
ಇಷ್ಟೂ ದಿನದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಪ್ರತಿಬಾರಿ ಸೋಮವಾರ ಅಥವಾ ಮಂಗಳವಾರ ನಾಮಿನೇಷನ್ ಎಪಿಸೋಡ್ ಪ್ರಸಾರ ಕಾಣುತ್ತಿದ್ದವು. ಮಂಗಳವಾರದ ಬಳಿಕ ವೋಟಿಂಗ್ ಲೈನ್ ತೆರೆಯಲಾಗುತ್ತಿತ್ತು. ಆದರೆ ಈ ವಾರ ವೋಟಿಂಗ್ ಲೈನ್ ಓಪನ್ ಆಗಿಲ್ಲ ಎನ್ನಲಾಗುತ್ತಿದೆ. ಗುರುವಾರ ನಾಮಿನೇಷ್ ಪ್ರಕ್ರಿಯೆ ಪೂರ್ಣಗೊಂಡಿದೆ. ಅದು ಅಲ್ಲದೇ ವೋಟ್ ಮಾಡಿ ಸೆವ್ ಮಾಡಿ ಎನ್ನುವ ಪೋಸ್ಟ್ ಕೂಡ ಇಲ್ಲ. ಹಾಗಾದ್ರೆ ಈ ವಾರ ಖಂಡಿತ ನಾಮಿನೇಷನ್ ಇಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.















Comments