ಮರಾಠಿಯ 'ಕಾಸ್ರಾ' ಕನ್ನಡ ರಿಮೇಕ್ 'ಜೈ ಕಿಸಾನ್' ಚಿತ್ರದ ಬಿಡುಗಡೆಗೆ ದಿನಾಂಕ ಫಿಕ್ಸ್!
- Oct 22, 2024
- 1 min read
Updated: Oct 24, 2024
ವಿದ್ಯಾವಂತ ಯುವಕನೊಬ್ಬ ಅವಶ್ಯಕತೆಯಿಂದ ಕೃಷಿಗೆ ತಿರುಗುತ್ತಾನೆ. ನಂತರ ಆತ ಕೃಷಿ ಮಾಡಿ ಗೆಲ್ಲುತ್ತಾನಾ ಎಂಬುದನ್ನು ಚಿತ್ರದ ಮೂಲಕ ಕಟ್ಟಿಕೊಡಲಾಗಿದೆ ನಿರ್ದೇಶಕ ವಿಕಾಸ್ ವಿಲಾಸ್ ಮಿಸಾಳ್ ಹೇಳುತ್ತಾರೆ.

ಮರಾಠಿಯ ಕಾಸ್ರಾ ಚಿತ್ರದ ಕನ್ನಡ ರಿಮೇಕ್ ಜೈ ಕಿಸಾನ್ ರಾಜ್ಯಾದ್ಯಂತ ನವೆಂಬರ್ 7ರಂದು ಬಿಡುಗಡೆಯಾಗುತ್ತಿದೆ. 2024ರ ಮೇನಲ್ಲಿ ಮರಾಠಿಯಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಮಹಾರಾಷ್ಟ್ರದ ರವಿ ನಾಗ್‌ಪುರೇ ಕಥೆ ಬರೆದು ನಿರ್ಮಿಸಿದ್ದಾರೆ. ಆಧುನಿಕ ಕೃಷಿ ಪದ್ಧತಿಗಳನ್ನು ಪ್ರಚಾರ ಮಾಡುವಾಗ ರೈತರು ಎದುರಿಸುವ ಸವಾಲುಗಳನ್ನು ಚಿತ್ರಿಸಲಾಗಿದೆ.
ಇತ್ತೀಚಿನ ಮಾಧ್ಯಮ ಸಂವಾದದಲ್ಲಿ ರವಿ ನಾಗ್‌ಪುರೇ ಚಿತ್ರದ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ರೈತನೊಬ್ಬನ ಕುರಿತಾದ ಈ ಚಿತ್ರದ ಕಥೆಯು ಮನಸೆಳೆಯುವಂತಿದೆ. ಮರಾಠಿಯಲ್ಲಿ ಯಶಸ್ವಿಯಾಗಿ ಬಿಡುಗಡೆಯಾದ ನಂತರ, ಇದು ಕನ್ನಡ ಆವೃತ್ತಿಗೆ ಅರ್ಹವಾಗಿದೆ ಎಂದು ನಾನು ಭಾವಿಸಿದೆ ಎಂದು ಹೇಳಿದರು.
ರೈತರ ಹೋರಾಟಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ತಮ್ಮ ಹೆಣ್ಣುಮಕ್ಕಳನ್ನು ರೈತರ ಮಕ್ಕಳಿಗೆ ಮದುವೆ ಮಾಡಿಕೊಡಬಾರದು ಎಂಬ ನಂಬಿಕೆಗೆ ನಾನು ಸವಾಲು ಹಾಕುತ್ತೇನೆ. ವಿದ್ಯಾವಂತರು ಆಧುನಿಕವಾಗಿ ಕೃಷಿಯನ್ನು ಅಳವಡಿಸಿಕೊಳ್ಳಬೇಕು. ಕೃಷಿಯು ಅನೇಕ ಅವಕಾಶಗಳನ್ನು ನೀಡುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಪ್ರಮುಖವಾಗಿ ಕೇಂದ್ರಿಕರಿಸಲಾಗಿದೆ ಎಂದರು.
ವಿದ್ಯಾವಂತ ಯುವಕನೊಬ್ಬ ಅವಶ್ಯಕತೆಯಿಂದ ಕೃಷಿಗೆ ತಿರುಗುತ್ತಾನೆ. ನಂತರ ಆತ ಕೃಷಿ ಮಾಡಿ ಗೆಲ್ಲುತ್ತಾನಾ ಎಂಬುದನ್ನು ಚಿತ್ರದ ಮೂಲಕ ಕಟ್ಟಿಕೊಡಲಾಗಿದೆ ನಿರ್ದೇಶಕ ವಿಕಾಸ್ ವಿಲಾಸ್ ಮಿಸಾಳ್ ಹೇಳುತ್ತಾರೆ. ನಾಗಪುರೆಯವರ ಉದ್ದೇಶವನ್ನು ಶ್ಲಾಘಿಸಿದ ಅವರು, ರವಿ ನಾಗ್ಪುರೆ ಬರೆದ ಕಥೆಯು ಅಸಾಧಾರಣವಾಗಿದೆ. ಅದನ್ನು ನಿರ್ದೇಶಿಸುವ ಭಾಗ್ಯ ನನಗೆ ಸಿಕ್ಕಿದೆ. ನಾಯಕ ನಟರಾಗಿ ಜನಮೇಜಯ್ ತೆಲಂಗ್ ಮತ್ತು ತನ್ವಿ ಸಾವಂತ್ ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ನನ್ನ ಪಾತ್ರವು ಆಧುನಿಕ ಕೃಷಿ ಪದ್ಧತಿಗಳು ಇತರರಿಗೆ ಮಾದರಿಯಾಗುತ್ತದೆ ಎಂದು ನಾಯಕ ನಟ ಜನಮೇಜಯ್ ತೆಲಂಗ್ ಹೇಳಿದರೆ, ನಟಿ ತನ್ವಿ ಸಾವಂತ್, ಚಿತ್ರದಲ್ಲಿನ ನನ್ನ ಪಾತ್ರದ ಬಗ್ಗೆ ನನಗೆ ಹೆಮ್ಮೆ ಇದೆ. ಇದು ಶಕ್ತಿಯುತ ಸಂದೇಶವನ್ನು ಹೊಂದಿದೆ ಎಂದು ನಂಬುತ್ತೇನೆ ಎಂದು ಹೇಳಿದರು.
Comentarios