top of page

ರಾಜ್ಯದಲ್ಲಿ ಕಮಲ್ ಹಾಸನ್ ಸಿನಿಮಾ ರಿಲೀಸ್ ಮಾಡಲು ಬಿಡಲ್ಲ ಎಂದ ರಾಜಕುಮಾರ್ ಅಭಿಮಾನಿಗಳು

  • Writer: Ananthamurthy m Hegde
    Ananthamurthy m Hegde
  • May 28
  • 1 min read
ree

ಕಮಲ್‌ ಹಾಸನ್‌, ಒಬ್ಬ ಅತ್ಯುತ್ತಮ ನಟ. ಆದರೆ ಇಂದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬೆಂಗಳೂರಿನಲ್ಲಿ ಥಗ್ ಲೈಫ್ ಸಿನಿಮಾ ಪ್ರಮೋಷನ್‌ ಸಂದರ್ಭದಲ್ಲಿ ನೀಡಿರುವ ಹೇಳಿಕೆಯೊಂದು ಕನ್ನಡಿಗರನ್ನು ಕೆರಳುವಂತೆ ಮಾಡಿದೆ. ಕನ್ನಡಿಗರು ಅಂದ್ರೆ ವಿಶಾಲ ಹೃದಯದವರು. ಆದ್ರೆ ಕನ್ನಡಿಗರಿಗೆ, ಕನ್ನಡ ಭಾಷೆಗೆ  ಅನ್ಯಾಯ ಆಯ್ತು ಅಂದ್ರೆ ಸುಮ್ಮನೆ ಕುಳಿತುಕೊಳ್ಳೋ ಮಾತೇ ಇಲ್ಲ. ಕನ್ನಡ ಭಾಷೆಗೆ, ಕನ್ನಡಿಗರಿಗೆ ಅಪಮಾನ ಮಾಡಿದವರಿಗೆ ತಕ್ಕ ಬುದ್ಧಿ ಕಲಿಸುತ್ತಾರೆ. ಈ ಹಿಂದೆ ಬಿಹಾರದ ಯುವಕನೊಬ್ಬ, ಎಸ್‌ಬಿಐ ಮ್ಯಾನೇಜರ್, ಸಿಂಗರ್ ಸೋನು ನಿಗಮ್ ಕನ್ನಡಿಗರ ಬಗ್ಗೆ ಕೀಳಾಗಿ ಮಾತನಾಡಿದ್ದಕ್ಕೆ ಆಕ್ರೋಶಕ್ಕೆ ಗುರಿಯಾಗಿದ್ದರು. ಇದೀಗ ಕಮಲ್‌ ಹಾಸನ್‌ ಬೆಂಗಳೂರಿನಲ್ಲಿ ನಡೆದ ಈವೆಂಟ್​ನಲ್ಲಿ ಮಾತನಾಡುವಾಗ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಸದ್ಯ ಈ ಹೇಳಿಕೆಗೆ ರಾಜ್ಯಾದ್ಯಂತ ಟೀಕೆಗಳು ವ್ಯಕ್ತವಾಗುತ್ತಿದೆ.

ಹೌದು, ಕಮಲ್‌ ಹಾಸನ್‌ ಬೆಂಗಳೂರಿನಲ್ಲಿ ನಡೆದ ಈವೆಂಟ್​ನಲ್ಲಿ ಮಾತನಾಡುವಾಗ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ನೀಡಿರುವ ಹೇಳಿಕೆ ಸದ್ಯ ಭಾರೀ ವಿವಾದಕ್ಕೆ ಗುರಿಯಾಗಿದೆ. ಇದೀಗ ಡಾ. ರಾಜಕುಮಾರ್ ಅಭಿಮಾನಿಗಳ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಪ್ರತ್ಯೇಕ ಪ್ರತಿಭಟನೆ ನಡೆಸಿ, ಕಮಲ್ ಹಾಸನ್‌ ಚಿತ್ರಗಳನ್ನು ರಾಜ್ಯದಲ್ಲಿ ಬಿಡುಗಡೆ ಮಾಡಬಾರದು. ಬಿಡುಗಡೆ ಮಾಡಿದರೆ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ.

Comments


Top Stories

bottom of page