ರಿಟರ್ನ್ ಎಂಟ್ರಿ ಕೊಟ್ಟ ತ್ರಿವಿಕ್ರಮ್
- Ananthamurthy m Hegde
- Dec 24, 2024
- 1 min read

ಪ್ರೇಕ್ಷಕರು ಊಹಿಸಿದಂತೆ ತ್ರಿವಿಕ್ರಮ್ ಕಮ್‌ಬ್ಯಾಕ್ ಆಗಿದ್ದಾರೆ. ಸ್ವತಃ ಕಿಚ್ಚ ಸುದೀಪ್ ಅವರು ಏತಕ್ಕಾಗಿ ಔಟ್ ಮಾಡಿದ್ದೇವೆ ಎಂಬುದರ ಬಗ್ಗೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಕಾರಣ ಕೂಡ ತಿಳಿಸಿದ್ದಾರೆ. ಇನ್ನು ತ್ರಿವಿಕ್ರಮ್ ಮನೆಯಿಂದ ಆಚೆ ಹೋದ ಬಳಿಕ ಕೆಲವು ಸ್ಪರ್ಧಿಗಳು ಖುಷಿಯಾಗಿದ್ದರು. ಆದರೆ ಸೇಫ್ ಎಂದು ಗೊತ್ತಾದಾಗ ಶಾಕ್ ಆಗಿದ್ದಾರೆ.ಮಾತ್ರವಲ್ಲ ಮನೆಗೆ ಎಂಟ್ರಿ ಕೊಟ್ಟ ಬಳಿಕವೂ ತ್ರಿವಿಕ್ರಮ್ ಫುಲ್ ಶಾಕ್ ಆದರು. ಕಾರಣವಾದ್ರೂ ಏನು?
ನಿನ್ನೆ ತ್ರಿವಿಕ್ರಮ್ ಅವರು ಔಟ್ ಆಗಿದ್ದಾರೆ ಎಂದು ಸುದೀಪ್ ಅನೌನ್ಸ್ ಮಾಡಿದ್ದರು. ಬಾಗಿಲು ಓಪನ್ ಆಗುತ್ತಿದ್ದಂತೆ ಮನೆ ಮಂದಿ ಕೂಡ ಶಾಕ್ ಆಗಿದ್ದರು. ಆದರೆ ಈ ವಾರ ಸುದೀಪ್ ಅವರು ಈ ಬಗ್ಗೆ ಅನೌನ್ಸ್ ಮಾಡಿದ್ದಾರೆ. ತ್ರಿವಿಕ್ರಮ್ ಔಟ್ ಆಗಿಲ್ಲ. ಆದರೆ ಅವರಿಗೆ ಅವರೇ ನಾಮಿನೇಟ್ ಮಾಡಿಕೊಂಡದ್ದರ ಬಗ್ಗೆ ಗೊತ್ತಾಗ ಪಡಿಸಿಬೇಕಿತ್ತು. ಇನ್ನು ವೋಟಿಂಗ್ ಲೈನ್ಸ್ ಕೂಡ ಓಪನ್ ಆಗಿರಲಿಲ್ಲ ಎಂದಿದ್ದಾರೆ.
ಮನೆಗೆ ರಿಟರ್ನ್ ಎಂಟ್ರಿ ಬಳಿಕ ತ್ರಿವಿಕ್ರಮ್ ಶಾಕ್
ಇನ್ನು ತ್ರಿವಿಕ್ರಮ್ ಮನೆಗೆ ಬರುತ್ತಿದ್ದಂತೆ ಯಾವೊಬ್ಬ ಸ್ಪರ್ಧಿಗಳು ತ್ರಿವಿಕ್ರಮ್ ಜೊತೆ ರಿಯಾಕ್ಟ್ ಮಾಡುತ್ತಿರಲಿಲ್ಲ. ಹೀಗಾಗಿ ತ್ರಿವಿಕ್ರಮ್ ಶಾಕ್ ಆಗಿದ್ದರು. ಬಳಿಕ ಬಿಗ್ ಬಾಸ್ ಸುದೀಪ್ ಕೊಟ್ಟ ಟಾಸ್ಕ್ ಮುಗಿದಿದೆ ತ್ರಿವಿಕ್ರಮ್ ಜತೆ ಮಾತನಾಡಬಹುದು ಎಂದು ಆದೇಶಿಸಿದ ನಂತರ ಎಲ್ಲರು ಮಾತನಾಡಿದ್ದಾರೆ. ಇನ್ನು ಭವ್ಯಾ ಹಾಗೂ ತ್ರಿವಿಕ್ರಮ್ ಸಪರೇಟ್ ಆಗಿ ಮಾತುಕತೆಯನ್ನೂ ಆರಂಭಿಸಿದ್ದರು.
ಕಿಚ್ಚನ ಮೆಚ್ಚುಗೆ ಪಡೆದ ಭವ್ಯಾ ಗೌಡ
ಭವ್ಯಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಎರಡನೇ ಬಾರಿ ಕ್ಯಾಪ್ಟನ್ ಆಗಿದ್ದಾರೆ. ಯಾರ ಬೆಂಬಲ ಪಡೆಯದೇ, ಸ್ವಂತ ಶ್ರಮದಿಂದ ಕ್ಯಾಪ್ಟನ್ ಪಟ್ಟವನ್ನು ಪಡೆದುಕೊಂಡಿದ್ದಾರೆ. ಈ ಬಗ್ಗೆ ಕಿಚ್ಚ ಮೆಚ್ಚುಗೆ ಪಡೆದರು.ಕಳೆದ ವಾರ ಟಾಸ್ಕ್‌ನಲ್ಲಿ ತ್ರಿವಿಕ್ರಮ್ ಸ್ಪರ್ಧಿಗಳ ಜೊತೆಗೆ ಚರ್ಚಿಸಿ ಒಬ್ಬರನ್ನು ನಾಮಿನೇಟ್ ಮಾಡಿ ಅಂತ ಹೇಳಿದ್ದಾರೆ.
ಇದಕ್ಕೆ ತ್ರಿವಿಕ್ರಮ್ ನಾನು ನನ್ನನ್ನೇ ನಾಮಿನೇಟ್ ಮಾಡಿಕೊಳ್ಳುತ್ತೇನೆ ಅಂತ ಹೇಳಿ ನಾಮಿನೇಟ್ ಮಾಡಿಕೊಂಡಿದ್ದರು.ಈ ಬಗ್ಗೆ ತ್ರಿವಿಕ್ರಮ್‌ಗೆ ಸುದೀಪ್ ಅವರು ಈ ಬಗ್ಗೆ ಕಿಚ್ಚ ಸುದೀಪ್ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದರು.
ಅಂತಿಮವಾಗಿ ಭವ್ಯಾ ಗೌಡ ಕಿಚ್ಚನ ಚಪ್ಪಾಳೆ ಪಡೆದುಕೊಂಡರು.















Comments