top of page

ವಾರ್ನರ್​ ಹೆಸರಿನಲ್ಲಿದ್ದ ಆಲ್​ಟೈಮ್ ರೆಕಾರ್ಡ್ ಬ್ರೇಕ್ ಮಾಡಿ ವಿರಾಟ್!

  • Writer: Ananthamurthy m Hegde
    Ananthamurthy m Hegde
  • 2 days ago
  • 2 min read

ಐಪಿಎಲ್ 2025 ರ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್‌ಗಳಿಂದ ರೋಮಾಂಚಕ ಜಯ ಗಳಿಸಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 27 ಎಸೆತಗಳಲ್ಲಿ 54 ರನ್‌ಗಳ ಭರ್ಜರಿ ಬ್ಯಾಟಿಂಗ್‌ನೊಂದಿಗೆ ತಂಡವನ್ನು ಪ್ಲೇಆಫ್‌ನ ಕ್ವಾಲಿಫೈಯರ್-1ಗೆ ಎಂಟ್ರಿಕೊಡಲು ಪ್ರಮುಖ ಪಾತ್ರವಹಿಸಿದರು. ಆದರೆ ಈ ಅರ್ಧಶತಕವು ಕೇವಲ ಗೆಲುವಿಗೆ ಮಾತ್ರ ಸೀಮಿತವಾಗಿರಲಿಲ್ಲ, ಕೊಹ್ಲಿ ಈ ಪಂದ್ಯದಲ್ಲಿ ಮೂರು ಐತಿಹಾಸಿಕ ದಾಖಲೆಗಳನ್ನು ಮಾಡಿದ್ದಾರೆ, ವಿಶೇಷವಾಗಿ ಐಪಿಎಲ್‌ನಲ್ಲಿ ಅತೀ ಹೆಚ್ಚು (63) ಅರ್ಧಶತಕಗಳ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಇದು ಐಪಿಎಲ್ ಇತಿಹಾಸದಲ್ಲೆ ಗರಿಷ್ಠವಾಗಿದೆ.

ಆದರೆ ಈ ಅರ್ಧಶತಕವು ಕೇವಲ ಗೆಲುವಿಗೆ ಮಾತ್ರ ಸೀಮಿತವಾಗಿರಲಿಲ್ಲ, ಕೊಹ್ಲಿ ಈ ಪಂದ್ಯದಲ್ಲಿ ಮೂರು ಐತಿಹಾಸಿಕ ದಾಖಲೆಗಳನ್ನು ಮಾಡಿದ್ದಾರೆ, ವಿಶೇಷವಾಗಿ ಐಪಿಎಲ್‌ನಲ್ಲಿ ಅತೀ ಹೆಚ್ಚು (63) ಅರ್ಧಶತಕಗಳ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಇದು ಐಪಿಎಲ್ ಇತಿಹಾಸದಲ್ಲೆ ಗರಿಷ್ಠವಾಗಿದೆ.

ವಿರಾಟ್ ಕೊಹ್ಲಿ ಲಖನೌ ವಿರುದ್ಧ 54 ರನ್‌ಗಳ ಇನಿಂಗ್ಸ್‌ನೊಂದಿಗೆ ಐಪಿಎಲ್‌ನಲ್ಲಿ ತಮ್ಮ 63ನೇ ಅರ್ಧಶತಕವನ್ನು ಗಳಿಸಿದರು, ಇದರೊಂದಿಗೆ ಡೇವಿಡ್ ವಾರ್ನರ್‌ರ 62 ಅರ್ಧಶತಕಗಳ ದಾಖಲೆಯನ್ನು ಮುರಿದರು. ಈ ಸೀಸನ್‌ನಲ್ಲಿ ಕೊಹ್ಲಿ ಒಟ್ಟು 8 ಅರ್ಧಶತಕಗಳನ್ನು ಗಳಿಸಿದ್ದಾರೆ.

ವಿರಾಟ್ ಕೊಹ್ಲಿ ಲಖನೌ ವಿರುದ್ಧ 54 ರನ್‌ಗಳ ಇನಿಂಗ್ಸ್‌ನೊಂದಿಗೆ ಐಪಿಎಲ್‌ನಲ್ಲಿ ತಮ್ಮ 63ನೇ ಅರ್ಧಶತಕವನ್ನು ಗಳಿಸಿದರು, ಇದರೊಂದಿಗೆ ಡೇವಿಡ್ ವಾರ್ನರ್‌ರ 62 ಅರ್ಧಶತಕಗಳ ದಾಖಲೆಯನ್ನು ಮುರಿದರು. ಈ ಸೀಸನ್‌ನಲ್ಲಿ ಕೊಹ್ಲಿ ಒಟ್ಟು 8 ಅರ್ಧಶತಕಗಳನ್ನು ಗಳಿಸಿದ್ದಾರೆ. ಪ್ರಸ್ತುತ ದಾಖಲೆಗಳನ್ನ ಗಮನಿಸಿದರೆ, ಕೊಹ್ಲಿಯ ಈ ಗರಿಷ್ಠ ಅರ್ಧಶತಕಗಳ ದಾಖಲೆಯನ್ನ ಯಾರಿಂದಲೂ ಇನ್ನು ಕನಿಷ್ಠ 10 ವರ್ಷಗಳಾದರೂ ಮುರಿಯಲು ಯಾರಿಂದಲೂ ಸಾಧ್ಯವಿಲ್ಲ. ಕೊಹ್ಲಿ ಹೊರೆತುಪಡಿಸಿದರೆ, ರೋಹಿತ್​ 46 ಅರ್ಧಶತಕಗಳೊಡನೆ ಸಕ್ರಿಯ ಆಟಗಾರರಲ್ಲಿ 2ನೇ ಸ್ಥಾನದಲ್ಲಿದ್ದಾರೆ.

ಪ್ರಸ್ತುತ ದಾಖಲೆಗಳನ್ನ ಗಮನಿಸಿದರೆ, ಕೊಹ್ಲಿಯ ಈ ಗರಿಷ್ಠ ಅರ್ಧಶತಕಗಳ ದಾಖಲೆಯನ್ನ ಯಾರಿಂದಲೂ ಇನ್ನು ಕನಿಷ್ಠ 10 ವರ್ಷಗಳಾದರೂ ಮುರಿಯಲು ಯಾರಿಂದಲೂ ಸಾಧ್ಯವಿಲ್ಲ. ಕೊಹ್ಲಿ ಹೊರೆತುಪಡಿಸಿದರೆ, ರೋಹಿತ್​ 46 ಅರ್ಧಶತಕಗಳೊಡನೆ ಸಕ್ರಿಯ ಆಟಗಾರರಲ್ಲಿ 2ನೇ ಸ್ಥಾನದಲ್ಲಿದ್ದಾರೆ.

ಕೆಎಲ್ ರಾಹುಲ್​​ 40 ಅರ್ಧಶತಕ ಸಿಡಿಸಿ 3ರಲ್ಲಿದ್ದಾರೆ. ಡುಪ್ಲೆಸಿಸ್​ 39, ರಹಾನೆ 33, ಸೂರ್ಯಕುಮಾರ್ ಯಾದವ್ 29, ಗಿಲ್​ 26, ಶ್ರೇಯಸ್ ಅಯ್ಯರ್ 26 ಅರ್ಧಶತಕ ಸಿಡಿಸಿದ್ದಾರೆ. ಕೊಹ್ಲಿ ಇನ್ನು ಮೂರು-ನಾಲ್ಕು ವರ್ಷ ಆಡಿದರೆ ಈ ಸಂಖ್ಯೆ ಇನ್ನು ಹೆಚ್ಚಾಗುತ್ತದೆ. ಗಿಲ್, ಅಯ್ಯರ್ ವಯಸ್ಸಲ್ಲಿ ಕಡಿಮೆ ಇದ್ದು, ಅವರು ಗರಿಷ್ಠ 50 ಅರ್ಧಶತಕ ಪೂರ್ಣಗೊಳಿಸಲು ಇನ್ನೂ 7 ಸೀಸನ್​ ಬೇಕಾಗುತ್ತದೆ. ಹಾಗಾಗಿ ಕೊಹ್ಲಿಯ ದಾಖಲೆ ಸದ್ಯಕ್ಕೆ ಯಾರಿಂದಲೂ ಇನ್ನು ಮುರಿಯಲು ಸಾಧ್ಯವಿಲ್ಲ ಎನ್ನುವುದು ಕ್ರಿಕೆಟ್ ತಜ್ಞರ ಲೆಕ್ಕಾಚಾರವಾಗಿದೆ.

Comments

Top Stories

bottom of page