top of page

ವಶಕ್ಕೆ ಪಡೆದಿದ್ದ BSF ಯೋಧನ ಬಿಡುಗಡೆ!

  • Writer: Ananthamurthy m Hegde
    Ananthamurthy m Hegde
  • 1 day ago
  • 1 min read



ಪಾಕಿಸ್ತಾನವು ಈ ತಿಂಗಳ ಆರಂಭದಲ್ಲಿ ವಶಕ್ಕೆ ತೆಗೆದುಕೊಂಡಿದ್ದ ಭಾರತೀಯ ಸೀಮಾ ಭದ್ರತಾ ಪಡೆ ಸಿಬ್ಬಂದಿಯನ್ನು ಬಿಡುಗಡೆ ಮಾಡಿದೆ ಎಂಬ ಸುದ್ದಿ ಬಂದಿದೆ. ಈ ಸಿಬ್ಬಂದಿಯನ್ನು ಬಿಎಸ್‌ಎಫ್ ಕಾನ್‌ಸ್ಟೇಬಲ್ ಪೂರ್ಣಮ್‌ ಕುಮಾರ್ ಶಾ ಎಂದು ಗುರುತಿಸಲಾಗಿದೆ. ಏಪ್ರಿಲ್ 23 ರಿಂದ ಪಾಕಿಸ್ತಾನದ ವಶದಲ್ಲಿದ್ದ ಬಿಎಸ್‌ಎಫ್ ಜವಾನ್ ಪೂರ್ಣಂ ಕುಮಾರ್ ಶಾ ಅವರನ್ನು ಇಂದು ಬೆಳಿಗ್ಗೆ 10:30 ರ ಸುಮಾರಿಗೆ ಅಮೃತಸರದ ಅಟ್ಟಾರಿಯ ಜಂಟಿ ಚೆಕ್ ಪೋಸ್ಟ್‌ನಲ್ಲಿ ಅಧಿಕೃತವಾಗಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು

ಏಪ್ರಿಲ್ 23, 2025ರಂದು, ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಮಾಮ್‌ಡೋಟ್ ಸೆಕ್ಟರ್‌ನಲ್ಲಿ, ಬಿಎಸ್‌ಎಫ್‌ನ 182ನೇ ಬೆಟಾಲಿಯನ್‌ನ ಕಾನ್‌ಸ್ಟೇಬಲ್ ಪೂರ್ಣಮ್ ಕುಮಾರ್ ಶಾ ಅವರು ಗಡಿ ಸಮೀಪದ ರೈತರಿಗೆ ರಕ್ಷಣೆ ನೀಡುವ ‘ಕಿಸಾನ್ ಗಾರ್ಡ್’ ಕರ್ತವ್ಯದಲ್ಲಿದ್ದಾಗ, ತಪ್ಪಾಗಿ ಪಾಕಿಸ್ತಾನದ ಗಡಿಗೆ ದಾಟಿದರು.


Comments


Top Stories

bottom of page