ಶಿವಣ್ಣನ ಆರೋಗ್ಯಕ್ಕಾಗಿ ದೇವರ ಮೊರೆ ಹೋದ ಫ್ಯಾನ್ಸ್!
- Ananthamurthy m Hegde
- Dec 24, 2024
- 1 min read

ಸ್ಯಾಂಡಲ್ವುಡ್ ನಟ ಹ್ಯಾಟ್ರಿಕ್ ಹೀರೋ ಶಿವಣ್ಣನಿಗೆ ಅಮೇರಿಕಾದಲ್ಲಿ ಇಂದು ಸರ್ಜರಿ ನಡೆಯಲಿದೆ. ಅನಾರೋಗ್ಯದ ಹಿನ್ನೆಲೆ ಸರ್ಜರಿಗಾಗಿ ಅಮೇರಿಕಾ ಹೋಗಿರುವ ಶಿವಣ್ಣ ಅವರಿಗಾಗಿ ಅಭಿಮಾನಿಗಳು ವಿಶೇಷವಾಗಿ ಪೂಜೆಯ ಜೊತೆ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಮೈಸೂರಿನ ಅಗ್ರಹಾರದಲ್ಲಿರುವ 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಅರ್ಚನೆ ನಡೆದಿದ್ದು, ರಾಜ್ಯದ ನಾನಾ ಭಾಗಗಳಲ್ಲಿ ಶಿವಣ್ಣನ ಹಾರೈಕೆಗಾಗಿ ಅಭಿಮಾನಿಗಳಿಂದ ವಿಶೇಷ ಪೂಜೆ ನಡೆದಿದೆ. ಮುಡಿಕೊಟ್ಟು, ಉರುಳು ಸೇವೆ ಮಾಡಿದ ಶಿವಣ್ಣ ಫ್ಯಾನ್ಸ್ ಶಿವಣ್ಣ ಬೇಗ ಗುಣಮುಖರಾಗಿ ಬನ್ನಿ ಎಂದು ಹಾರೈಸಿದ್ದಾರೆ.
ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ಗೆ ಶಸ್ತ್ರಚಿಕಿತ್ಸೆ ಹಿನ್ನೆಲೆ ಶಿವರಾಜ್ ಕುಮಾರ್ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಶಿವಣ್ಣ ಅಭಿಮಾನಿ ಎನ್ ಆರ್ ನಾಗೇಶ್ ನೇತೃತ್ವದಲ್ಲಿ ಪೂಜೆ ನಡೆದಿದೆ. ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಲಾಗಿದ್ದು, ಹನುಮಂತನಲ್ಲಿ ಶಿವಣ್ಣ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಲಾಗಿದೆ.ಈಡುಗಾಯಿ ಸೇವೆ ಸಲ್ಲಿಸಿ ಶಿವರಾಜ್ ಕುಮಾರ್ ಗುಣಮುಖರಾಗುವಂತೆ ಪೂಜೆ ಮಾಡಲಾಗಿದೆ.
Comments