ನ.೨೪ಕ್ಕೆ ಭಟ್ಕಳದಲ್ಲಿ ವೈದ್ಯಕೀಯ ಶಿಬಿರ
ಭಟ್ಕಳ : ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಬಳಗ ನೇತೃತ್ವದಲ್ಲಿ ಸರಕಾರಿ ಆಸ್ಪತ್ರೆಯ ಸಹಯೋಗದಲ್ಲಿ ನವೆಂಬರ್ ೨೪ ರಂದು ಭಾನುವಾರ ಬೆಳಿಗ್ಗೆ ೯ಗಂಟೆಯಿAದ ೧೨ ಗಂಟೆಯ ವರೆಗೆ ಸರಕಾರಿ ಆಸ್ಪತ್ರೆಯಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿAದ ವೈದ್ಯಕೀಯ ಶಿಬಿರ ನಡೆಯಲಿದೆ.
ಈ ಕುರಿತು ಬುಧವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ವ್ಯವಸ್ಥಾಪಕ ಜೈಸನ್, ಶಿಬಿರದಲ್ಲಿ ಕೆ ಎಸ್ ಹೆಗ್ಡೆ ಆಸ್ಪತ್ರೆಯ ಖ್ಯಾತ ಎಲುಬು ಮತ್ತು ಕೀಲು ತಜ್ಞ ಡಾ. ವಿಕ್ರಮ್ ಶೆಟ್ಟಿ, ಜನರಲ್ ಸರ್ಜನ್ ಡಾ. ಅಭಿಜಿತ್ ಎಸ್ ಶೆಟ್ಟಿ, ಎಲುಬು ಮತ್ತು ಕೀಲು ತಜ್ಞ ಡಾ. ಪ್ರಥ್ವಿ ಕೆ ಪಿ, ಪ್ಲಾಸ್ಟಿಕ್ ಸರ್ಜನ್ ಡಾ. ಭರತ್ ಜೆ ನಾಯ್ಕ ಮುಂತಾದ ವೈದ್ಯರ ತಂಡ ಪಾಲ್ಗೊಂಡು ವೈದ್ಯಕೀಯ ತಪಾಸಣೆ, ಅಗತ್ಯ ಸಲಹೆ ನೀಡಲಿದ್ದಾರೆ. ಕೆ ಎಸ್ ಹೆಗ್ಡೆ ಆಸ್ಪತ್ರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿ ಜನತೆಗೆ ಅನುಕೂಲ ಮಾಡಿಕೊಟ್ಟಿದೆ ಎಂದ ಅವರು ತಪಾಸಣೆಗೆ ಆಗಮಿಸುವವರು ಈ ಹಿಂದೆ ಯಾವುದೇ ಆಸ್ಪತ್ರೆ, ವೈದ್ಯರಲ್ಲಿ ಚಿಕಿತ್ಸೆ ಪಡೆದವರಾದಲ್ಲಿ ಹಿಂದಿನ ವೈದ್ಯಕೀಯ ದಾಖಲೆ ತರಬೇಕಿದೆ. ಕೆ ಎಸ್ ಹೆಗ್ಡೆ ಆಸ್ಪತ್ರೆಯಿಂದ ಕ್ಷೇಮ ಹೆಲ್ತ್ ಕಾರ್ಡ ಎನ್ನುವ ವಿಮಾ ಯೋಜನೆಯೂ ಲಭ್ಯವಿದ್ದು, ಶಿಬಿರದಲ್ಲಿ ಆಸಕ್ತರು ವೈಯಕ್ತಿಕ ಮತ್ತು ಕುಟುಂಬ ಸದಸ್ಯರ ಆರೋಗ್ಯ ವಿಮಾ ಕೂಡ ಮಾಡಿಸಬಹುದಾಗಿದೆ. ವಿಮಾ ಯೋಜನೆಗೆ ಆಧಾರ ಮತ್ತು ರೇಶನ್ ಕಾರ್ಡ ಝೆರಾಕ್ಸ ಪ್ರತಿ ಖಡ್ಡಾಯವಾಗಿದೆ ಎಂದರು.
ಬಳಿಕ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಮಾತನಾಡಿ, ಶಿಬಿರದಲ್ಲಿ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರು ಆಗಮಿಸುವುದರಿಂದ ವೈದ್ಯಕೀಯ ಶಿಬಿರದ ಸದುಪಯೋಗವನ್ನು ಜನರು ಪಡೆಯಬೇಕು ಎಂದರು.
ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ್ ಮಾತನಾಡಿ, ಜನತೆಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ತಜ್ಞ ವೈದ್ಯರ ತಂಡದಿAದ ವೈದ್ಯಕೀಯ ಶಿಬಿರ ಏರ್ಪಡಿಸಲಾಗಿದೆ. ಇದರ ಸದುಪಯೋಗವನ್ನು ಪಡೆಯಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಮನಮೋಹನ ನಾಯ್ಕ, ಕ್ರಿಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ದೀಪಕ ನಾಯ್ಕ, ಪ್ರಧಾನ ಕಾರ್ಯದರ್ಶಿ ಪಾಂಡುರAಗ ನಾಯ್ಕ ಮುಂತಾದವರಿದ್ದರು.









Comments