top of page

ವೈಯಕ್ತಿಕ ದಾಖಲೆ ಸಲ್ಲಿಕೆಗೆ ಒತ್ತಾಯಿಸುವಂತಿಲ್ಲ : ರವೀಂದ್ರ ನಾಯ್ಕ

Writer: Ananthamurthy m Hegde
Ananthamurthy m Hegde
Nov 10, 2024
1 min read

ಸಿದ್ದಾಪುರ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಪಾರಂಪರಿಕ ಅರಣ್ಯವಾಸಿಗಳಿಗೆ ಸಾಗುವಳಿ ಮಂಜೂರಿ ಹಕ್ಕಿಗೆ ಸಂಬಂಧಿಸಿದಂತೆ  ಮೂರು ತಲೆಮಾರಿನ ವೈಯಯಕ್ತಿಕ ನಿರ್ದಿಷ್ಟ ದಾಖಲೆಗಳ ಒತ್ತಾಯಿಸುವಿಕೆಗೆ ಅವಕಾಶವಿಲ್ಲ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಅವರು ಶನಿವಾರ   ಸಿದ್ದಾಪುರದಲ್ಲಿ ಬೆಂಗಳೂರು ಚಲೋ ಕಾರ್ಯಕ್ರಮದ  ತಾಲೂಕಾ ಮಟ್ಟದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಅರಣ್ಯ ಹಕ್ಕು ಕಾಯಿದೆ, ಉಚ್ಛ ನ್ಯಾಯಾಲಯ ಮತ್ತು ಕೇಂದ್ರ ಬುಡಕಟ್ಟು ಮಂತ್ರಾಲಯದ ಆದೇಶವನ್ನು ಉಲ್ಲೇಖಿಸಿ ಕಾನೂನು ವತಿರಿಕ್ತವಾಗಿ ಅರ್ಜಿಗಳು ತಿರಸ್ಕಾರವಾಗುತ್ತಿರುವದು ಖಂಡನಾರ್ಹ ಎಂದು ಅವರು ಹೇಳಿದರು .

ರಾಘವೇಂದ್ರ  ಸ್ವಾಗತಿಸಿದರು. ಸಂಚಾಲಕರಾದ ಮಾಬ್ಲೇಶ್ವರ ನಾಯ್ಕ ಪ್ರಸ್ತಾವಿಕ ಮಾತನಾಡಿದರು. ನಾಸೀರ್ ಖಾನ್ ಹೆಜ್ಜುರೂ, ವಿ.ಎಮ್ ನಾಯ್ಕ ಅವರಗುಪ್ಪಾ, ದಿನೇಶ ನಾಯ್ಕ, ಕೆ.ಟಿ. ನಾಯ್ಕ ಕ್ಯಾದಗಿ, ಮಾತನಾಡಿದ್ದರು. ಗೋವಿಂದ ಗೌಡ ಕಿಳುವಳ್ಳಿ, ಸುನೀಲ್ ನಾಯ್ಕ ಸಂಪಖAಡ, ಜಿ.ಜಿ.ನಾಯ್ಕ ಬೇಡ್ಕಣಿ, ಮಂಜುನಾಥ ನಾಯ್ಕ ಬಿದ್ರಖಾನ್, ನಾಗರಾಜ ಮರಾಠಿ ದೊಡ್ಮನೆ, ವಿನಾಯಕ ನಾಯ್ಕ ಹಲಗೇರಿ, ದನಂಜಯ ನಾಯ್ಕ ಕೊರ್ಲಕೈ, ರವಿ ನಾಯ್ಕ ಶಿರಳಗಿ, ಹಾಹಿರ ಬೇಗಂ ಕಾನಗೋಡ, ಶೇಕು ಶೈನ್ ಇಟಗಿ, ಸುಧಾಕರ ಮಡಿವಾಳ ಬಿಳಗಿ ಉಪಸ್ಥಿತರಿದ್ದರು.  



Comments


Top Stories

1/322
bottom of page