top of page

ಅಣ್ಣನ ಫೇವರಿಟ್ ಬೈಕ್ ನೋಡಿ ಧ್ರುವ ಸರ್ಜಾ ಎಮೋಷನಲ್

  • Writer: Ananthamurthy m Hegde
    Ananthamurthy m Hegde
  • Jun 21
  • 1 min read
ree

ಅಣ್ಣ ತಮ್ಮ ಅಂತ ಇದ್ರೆ ಹೀಗೆ ಇರಬೇಕು ನೋಡಿ. ಆ ರೀತಿನೇ ಇದ್ದರು. ಒಳ್ಳೆ ಫ್ರೆಂಡ್ಸ್ ಥರವೇ ಇದ್ದರು. ಆದರೆ, ಇಬ್ಬರೂ ಹೀರೋಗಳೇ. ಹಾಗಂತ ಜಲಸ್ ಏನೂ ಇರಲಿಲ್ಲ. ಒಬ್ಬರಿಗೊಬ್ಬರು ಸಿನಿಮಾಗಳನ್ನ ನೋಡ್ತಾ ಇದ್ದರು. ಹೆಮ್ಮೆನೂ ಪಡ್ತಾ ಇದ್ದರು. ಆದರೆ, ಅದ್ಯಾರ ಕೆಟ್ಟ ದೃಷ್ಟಿ ಬಿತ್ತೋ ಏನೋ? ಚಿರು ಹೋಗಿ ಬಿಟ್ರು. ಚಿರು ಹೋದ್ಮೇಲೆ ಧ್ರುವ ಸರ್ಜಾ ಇನ್ನು ಬೇಸರದಲ್ಲಿಯೇ ಇದ್ದಾರೆ. ಅಣ್ಣ ಸದಾ ಜೊತೆಗೆ ಇರಬೇಕು ಅಂತ ತಮ್ಮ ತೋಟದ ಮನೆಯಲ್ಲಿಯೇ ಅಣ್ಣನ ಅಂತ್ಯ ಕ್ರಿಯೆ ಮಾಡಿದ್ದಾರೆ. ಸುಂದರವಾದ ಸ್ಮಾರಕವನ್ನು ನಿರ್ಮಿಸಿದ್ದಾರೆ. ಹಾಗೆ ಅಣ್ಣನ ಫೇವರಿಟ್ ಯಮಹಾ ಬೈಕ್ ಅನ್ನು ರೆಡಿ ಮಾಡಿಸಿದ್ದಾರೆ. ಅದನ್ನ ನೋಡಿ ಇದೀಗ ಎಮೋಷನಲ್ ಕೂಡ ಆಗಿದ್ದಾರೆ. ಅಣ್ಣನ ನೆನಪಿನಲ್ಲಿಯೇ ಬೈಕ್ ಹತ್ತಿ ಒಂದು ರೌಂಡ್ ಹೋಗಿ ಬಂದಿದ್ದಾರೆ.



Comments


Top Stories

bottom of page